ಅರಿಸ್ಟಾರ್ಕಸ್
(ಕ್ರಿ.ಪೂ.ಸು.310--250). ಗ್ರೀಸ್ ದೇಶದ ಖಗೋಳಶಾಸ್ತ್ರಜ್ಞ. ಅರ್ಧಗೋಳಾಕಾರದ ನೆರಳುಗಡಿಯಾರವನ್ನು (ಸನ್ ಡಯಲ್) ರೂಪಿಸಿದ.  ಸೂರ್ಯನ ಸುತ್ತಲೂ ಭೂಮಿ ಪರಿಭ್ರಮಿಸುತ್ತಿದೆ ಎಂಬುದನ್ನು ಸ್ಥಿರೀಕರಿಸಿದವರಲ್ಲಿ ಮೊದಲಿಗ. ಸೂರ್ಯ ಮತ್ತು ಚಂದ್ರ ಇವುಗಳ ದೂರ ಮತ್ತು ಗಾತ್ರಗಳನ್ನು ಅಳೆದ. ಒಂದು ವರ್ಷದ ಅವಧಿ  ದಿವಸಗಳೆಂಬುದು ಕೇವಲ ಸರಿಸುಮಾರಾದ ಅವಧಿಯೆಂಬುದಾಗಿ ತಿಳಿಸಿ, ಇದಕ್ಕೆ ಒಂದು ದಿವಸದ 1/1623 ರಷ್ಟನ್ನು ಸೇರಿಸಬೇಕೆಂಬುದಾಗಿಯೂ ತಿಳಿಸಿಕೊಟ್ಟ.  ಖಗೋಳ ವಿಜ್ಞಾನದಲ್ಲಿ ಗಮನಾರ್ಹ ಲೆಕ್ಕಾಚಾರಗಳನ್ನು ಮಾಡಿದ. ತನ್ನ ಜೀವಿತಾವಧಿಯಲ್ಲಿ ಸಾಕಷ್ಟು ಅವಹೇಳನಕ್ಕೆ ಒಳಗಾದ. ಅನೇಕ ಶತಮಾನಗಳ ತರುವಾಯ ಆತನ ಪರಿಕಲ್ಪನೆಗಳಿಗೆ ಸೂಕ್ತ ಗೌರವ ಸಿಕ್ಕಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ